Ad Widget .

ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲ, ಎಲ್ಲಾ ಶಾಸಕರು ಬಿಜೆಪಿ ಸೇರಬೇಕು

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್‌ನ ಎಲ್ಲಾ 16 ವಿಧಾನಸಭಾ ಸದಸ್ಯರು ಬಿಜೆಪಿಗೆ ಸೇರಬೇಕು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕ ಆಶಿಶ್ ದೇಶ್‌ಮುಖ್ ಅವರು ನ.27 ರಂದು ಹೇಳಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ(ಎಂವಿಎ) ಕೇವಲ 46 ಸ್ಥಾನಗಳನ್ನು ಗೆದ್ದಿದ್ದು, ಎಂವಿಎಯ ಅಂಗವಾಗಿರುವ ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದುಕೊಂಡಿದೆ.”ಭಾರತೀಯ ಜನತಾ ಪಕ್ಷ ಮತ್ತು ಮಹಾಯುತಿ ಮೈತ್ರಿಕೂಟವು ಹೆಚ್ಚಿನ ಅಂತರದಿಂದ ಗೆದ್ದಿದೆ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪತನವನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ನ ಈ ಅವನತಿ ಎಲ್ಲೆಡೆ ನಡೆಯುತ್ತಿದೆ. ಆ ಪಕ್ಷಕ್ಕೆ ಯಾವುದೇ ಭವಿಷ್ಯ ಇಲ್ಲ” ಎಂದು ನಾಗುರ ಜಿಲ್ಲೆಯ ಸಾಪ್ಟರ್ ಕ್ಷೇತ್ರದಿಂದ ಗೆದ್ದಿರುವ ದೇಶಮುಖ್ ಅವರು ಹೇಳಿದ್ದಾರೆ.

Ad Widget . Ad Widget . Ad Widget .

ಕಾಂಗ್ರೆಸ್ ಮತ್ತು ಅದರ ಶಾಸಕರಿಗೆ ಯಾವುದೇ ಭವಿಷ್ಯವಿಲ್ಲ” ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಬೇಕು ಎಂದು ದೇಶಮುಖ್ ತಿಳಿಸಿದ್ದಾರೆ.”288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 16 ಶಾಸಕರನ್ನು ಹೊಂದಿದ್ದು, ಈಗ ಸದನದಲ್ಲಿ ಅದರ ಬಲ ಕೇವಲ ಶೇ. 5.55 ಆಗಿದೆ. ಇದು 1962 ರಿಂದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿದ ಅತ್ಯಂತ ಕಡಿಮೆ ಸೀಟು ಆಗಿದೆ” ಎಂದು ದೇಶಮುಖ್ ಹೇಳಿದ್ದಾರೆ.

Leave a Comment

Your email address will not be published. Required fields are marked *