ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದೇ ತಪ್ಪಾಯ್ತಾ?ಅತ್ತಿಗೆಯ ಕತ್ತು ಸೀಳಿದ ಮೈದುನ!

ಸಮಗ್ರ ನ್ಯೂಸ್: ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಅತ್ತಿಗೆಯನ್ನೇ ಕತ್ತು ಸೀಳಿ ಹತ್ಯೆಗೈದ ದುರ್ಘಟನೆ ಹುಬ್ಬಳ್ಳಿ ಎಸ್‌ಎಂ ಕೃಷ್ಣನಗರದಲ್ಲಿ ನ.17 ರಂದು ನಡೆದಿದೆ.ಸಾಜಿಯಾಬಾನು ಕೊಲೆಯಾದ ಮಹಿಳೆ, ನಾಸೀರ್ ಹತ್ಯೆಗೈದ ಆರೋಪಿ. ಸಾದಿಕ್ ಹಾಗೂ ನಾಸೀರ್ ಸಂಬಂಧದಲ್ಲಿ ಅಣ್ಣ-ತಮ್ಮಂದಿರು.ಹತ್ಯೆಯಾದ ಸಾಜಿಯಾಭಾನು ಸಾದಿಕ್ ಪತ್ನಿಯಾಗಿದ್ದಳೆ.

Ad Widget ... ..

ಕ್ಷುಲ್ಲಕ ಕಾರಣಕ್ಕೆ ಸಾದಿಕ್ ಹಾಗೂ ನಾಸೀರ್ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹರಿತವಾದ ಚಾಕು ಹಿಡಿದು ಅಣ್ಣನ ಮೇಲೆ ದಾಳಿ ಮಾಡಿದ್ದ ನಾಸಿರ್. ಚಾಕು ಹಿಡಿದು ದಾಳಿ ಮಾಡುವುದು ಕಂಡು ಜಗಳ ಬಿಡಿಸಲು ಬಂದಿರುವ ಸಾಜಿಯಾಭಾನು.

Ad Widget

ಜಗಳ ಬಿಡಿಸಲು ಮಧ್ಯೆ ನೀನು ಬರ್ತಿಯಾ ಅಂತಾ ಸಾಜಿಯಾಭಾನು ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ನಾಸಿರ್. ನೋಡನೋಡುತ್ತಿದ್ದಂತೆ ರಕ್ತದ ಮಡುವಿನಲ್ಲಿ ಒದ್ದಾಡುತ್ತ ಬಿದ್ದ ಸಾಜಿಯಾಭಾನು. ಸ್ಥಳೀಯರ ಸಹಾಯದಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಸಾಜಿಯಾಭಾನು

Leave a Comment

Your email address will not be published. Required fields are marked *