ಸುರತ್ಕಲ್: “ನನ್ನೊಂದಿಗೆ ಸಹಕರಿಸು, ಇಲ್ಲದಿದ್ದರೆ 24 ತುಂಡು ಮಾಡುವೆ”| ಅನ್ಯಕೋಮಿನ ಯುವಕನಿಂದ ಯುವತಿಗೆ ಘಾತಕ ಮೆಸೇಜ್

ಸಮಗ್ರ ನ್ಯೂಸ್: ಅನ್ಯಕೋಮಿನ ಯುವಕನೊಬ್ಬ ನೆರೆಮನೆಯ ಯುವತಿಗೆ ಘಾತಕ ಮೆಸೇಜ್ ಕಳಿಸಿದ್ದು ‘ನನ್ನೊಂದಿಗೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ” ಎಂದು ಬೆದರಿಕೆ ಸಂದೇಶ ಕಳಿಸಿದ ಆತಂಕಕಾರಿ ಘಟನೆ ಸುರತ್ಕಲ್‌ ನಲ್ಲಿ ಬೆಳಕಿಗೆ ಬಂದಿದೆ.

Ad Widget ... ..

“ನನ್ನೊಂದಿಗೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ” ಎಂದು ಸುರತ್ಕಲ್ ಇಡ್ಯಾದ ಅನ್ಯಕೋಮಿನ ಯುವಕನೊಬ್ಬ ನೆರೆಮನೆಯ ಯುವತಿಯೊಬ್ಬಳಿಗೆ ವಾಟ್ಸಾಪ್ ಸಂದೇಶ ಕಳುಹಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

Ad Widget

ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಈ ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತ ಯುವತಿಯ ಸಹೋದರನಿಗೆ ವಾಟ್ಸ್‌ಆಯಪ್ ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಯುವತಿಯ ಕುಟುಂಬ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಸುರತ್ಕಲ್ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *