ಸಮಗ್ರ ನ್ಯೂಸ್ : ಸುರತ್ಕಲ್ಲಿನ ಮುಕ್ಕ ರೆಡ್ ರಾಕ್ ಕಡಲ ಕಿನಾರೆಯ ನೀರಿನಲ್ಲಿ ಸುಮಾರು 8 ಮಂದಿ ಸ್ನೇಹಿತರೊಂದಿಗೆ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಅ.22 ರಂದು ರಾತ್ರಿ ನಡೆದಿದೆ.ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಿವಾಸಿ, ಕೃಷ್ಣಕುಮಾರ್ ಸೋಮಯಾಜಿ ಅವರ ಪುತ್ರ ಪ್ರಜ್ವಲ್ (21).
ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.