ಸಮಗ್ರ ನ್ಯೂಸ್: ಕಳೆದ 20 ವರ್ಷಗಳಿಂದ ಕರ್ನಾಟಕ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ರೈಂ ಗಣೇಶ್ ಎಂದು ಖ್ಯಾತರಾಗಿದ್ದ ಪತ್ರಕರ್ತ ಗಣೇಶ್ ಅಸುನೀಗಿದ್ದಾರೆ. ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕ್ರೈಂ ಗಣೇಶ್, ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದರು. ಅವರು ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್ ಎಂದು ಪರಿಚಿತರಾಗಿದ್ದ ಗಣೇಶ್ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಸ್ತೂರಿ, ನ್ಯೂಸ್ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್ ಅವರು ಪ್ರಸ್ತುತ ಖಾಸಗಿ ಸುದ್ದಿವಾಹಿನಿ ಟಿವಿ 5 ನಲ್ಲಿ ಇನ್ ಪುಟ್ ಚೀಫ್ ಅಗಿ ಸೇವೆ ಸಲ್ಲಿಸುತ್ತಿದ್ದರು.