Ad Widget .

ಕೊಬ್ಬರಿ ಎಣ್ಣೆ, ತೆಂಗಿನಕಾಯಿ ಪುಡಿಗೂ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್:ತೆಂಗಿನಕಾಯಿಗೆ ದರ ಕಡಿಮೆ ಎಂದು ತೆಂಗಿನಕಾಯಿ ಬೆಳೆಯೋ ರೈತರು ಬೇಸರ ಮಾಡಿಕೊಂಡಿದ್ದರು. ಕಳೆದ ತಿಂಗಳು ಕೆ.ಜಿಗೆ 25 ರೂ.ಗೆ ಕುಸಿತ ಕಂಡಿತ್ತು. ಆದರೆ ಇದೀಗ ತೆಂಗಿನಕಾಯಿ ದರ 50 ರೂ. ತಲುಪಿದೆ. ಇದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ತೆಂಗಿನಕಾಯಿ ದರ ಇಳಿದ ಪರಿಣಾಮ ಅನೇಕ ರೈತರು ಎಳನೀರನ್ನೇ ಮಾರಟ ಮಾಡಿದ್ದರು. ಎಳನೀರು ದರ ತೆಂಗಿನಕಾಯಿಗಿಂತ ಹೆಚ್ಚಿದೆ.ಮಾರುಕಟ್ಟೆಗೆ ತೆಂಗಿನಕಾಯಿ ಕಡಿಮೆ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ.

Ad Widget . Ad Widget . Ad Widget .

ಹಾಗಾಗಿ ದರದಲ್ಲೂ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಮತ್ತು ತೆಂಗಿನಕಾಯಿ ದರವೂ ಹೆಚ್ಚಾಗಿದ್ದು ರೈತರಿಗೆ ಒಳ್ಳೆ ಲಾಭ ತಂದು ಕೊಂಡುವ ನಿರೀಕ್ಷೆಯಿದೆ.

ರಾಜ್ಯದ ಬಹುತೇಕ ಜಿಲ್ಲೆಗಳ ವಾಣಿಜ್ಯ ಬೆಳೆಗಳ ಪೈಕಿ ಪ್ರಮುಖವಾಗಿರುವ ತೆಂಗು ಹಲವು ಕುಟುಂಬಗಳನ್ನು ಸಲಹುತ್ತಿದೆ. ಜಿಲ್ಲೆಯ ಅಂದಾಜು 9 ಸಾವಿರ ಹೆಕ್ಟೇ‌ರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇದೆ. ಇದೀಗ ದರ ಏರಿಕೆ ಕಂಡಿರುವುದು ಆ ಬೆಳೆಗಾರರಲ್ಲೂ ಸಹಜವಾಗಿ ಖುಷಿ ತಂದಿದೆ.

Leave a Comment

Your email address will not be published. Required fields are marked *