ಸಮಗ್ರ ನ್ಯೂಸ್: ದಕ್ಷಿಣ ಏಷ್ಯ ಜೂನಿಯರ್ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್ ಶಿಪ್ ಸೆ.11 ರಂದು ಚೆನ್ನೈನಲ್ಲಿ ಆರಂಭಗೊಂಡಿದೆ.
ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪರವರು 100 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಪಡೆದು, ಇಂದು 200 ಮೀಟರ್ ಅನ್ನು 23.91 ಕ್ರಮಾಂಕದಲ್ಲಿ ಮುಗಿಸಿ ದಾಖಲೆ ನಿರ್ಮಿಸಿದ್ದರು.ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಐವರು ಭಾಗವಹಿಸಿದ್ದು ಜಿಲ್ಲೆಯ ಇಬ್ಬರು ಭಾಗವಹಿಸಿದ್ದರು.
ಉನ್ನತಿ ಅಯ್ಯಪ್ಪನವರು ಮಹಿಳೆಯರ 100 ಮೀಟರ್ ಹರ್ಡಲ್ ಹಾಗೂ 200 ಮೀಟರ್ ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಉನ್ನತಿ ದಕ್ಷಣ ಏಷ್ಯಾ ದಾಖಲೆ ನಿರ್ಮಿಸಿದ್ದಾರೆ.ಇವರು ರಾಷ್ಟ್ರೀಯ ಅಥ್ಲೆಟ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ
ಮಾಜಿ ಒಲಂಪಿಯನ್ ಪ್ರಮೀಳಾ ದಂಪತಿಯ ಪುತ್ರಿಯಾಗಿದ್ದಾರೆ.