Ad Widget .

ಆ .17 ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ – ಐಎಂಎ ಘೋಷಣೆ

ಸಮಗ್ರ ನ್ಯೂಸ್: ಕೋಲ್ಕೋತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಹಾಗೂ ಆಸ್ಪತ್ರೆ ಮೇಲೆ ದುಷ್ಕಮಿ೯ಗಳ ದಾಳಿಯನ್ನ ಖಂಡಿಸಿ ಆಗಸ್ಟ್ 17 ರಿಂದ 18 ರ ಬೆಳಗ್ಗಿನವರೆಗೆ ರಾಷ್ಟ್ರವ್ಯಾಪಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೊಡಗಿನಲ್ಲಿಯೂ ವೈದ್ಯಕೀಯ ಸೇವೆಗಳು ಬಂದ್ ಆಗಲಿದೆ ಎಂದು ಸಂಘದ ಜಿಲ್ಲಾ ಘಟಕ ಮಾಹಿತಿ ನೀಡಿದೆ. ಕೊಡಗು ಜಿಲ್ಲೆಯ ಸಕಾ೯ರಿ ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ ಆ. 17 ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಆ.18 ರ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿದೆ.

Ad Widget . Ad Widget . Ad Widget .

ಹೊರ ರೋಗಿಗಳ ಚಿಕಿತ್ಸಾ ಸೇವೆ ಮತ್ತು ಶಸ್ತ್ರಚಿಕಿತ್ಸಾ ಘಟಕಗಳು ಈ ಅವಧಿಯಲ್ಲಿ ಕಾಯ೯ನಿವ೯ಹಿಸುವುದಿಲ್ಲ ಎಂದು ಮಾಹಿತಿ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ|ಶ್ಯಾಮ್ ಅಪ್ಪಣ್ಣ ಮತ್ತು ಪ್ರಧಾನ ಕಾಯ೯ದಶಿ೯ ಡಾ| ಸಿ.ಆರ್ ಪ್ರಶಾಂತ್ ವೈದ್ಯರ ಈ ಮುಷ್ಕರಕ್ಕೆ ಸಾವ೯ಜನಿಕರೂ ಸಹಕಾರ ನೀಡುವಂತೆ ಕೋರಿದ್ದಾರೆ.

Leave a Comment

Your email address will not be published. Required fields are marked *