ಸಮಗ್ರ: ಯುವ ಜೋಡಿಯೊಂದು ಮೈ ಬಿಸಿ ಮಾಡಿಕೊಳ್ಳೋದಕ್ಕೆ ಹೋಗಿ ಇನ್ನೇನು ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುತ್ತೇವೆ ಎಂಬ ಸಮಯದಲ್ಲಿ ಎಸ್ಕೇಪ್ ಆದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಸವಾರನೊಬ್ಬ ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಕರೆದುಕೊಂಡು ಬಂದು ಮಿಲನ ಕ್ರಿಯೆ ನಡೆಸಲು ಮುಂದಾಗಿದ್ದಾನೆ. ಈ ಜೋಡಿ ತಮಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡೇ ಬಂದಿದೆ. ಕಾಂಡೋಮ್, ಎಣ್ಣೆ, ಪಿಲ್ಸ್ ಯಾವುದೆಲ್ಲಾ ಬೇಕೋ ಅದನ್ನೆಲ್ಲಾ ಹಿಡಿದುಕೊಂಡು ಬಂದು ಏಕಾಂತದಲ್ಲಿ ಮೈಮರೆಯೋದಕ್ಕೆ ಸಿದ್ಧರಾಗಿದ್ದಾರೆ.
ಕಾಡಿನೊಳಕ್ಕೆ ಹೊಕ್ಕ ಜೋಡಿ ಮಿಲನ ಕ್ರಿಯೆಗೆ ಮುಂದಾದ ವೇಳೆ ಕಾಡಿನೊಳಗೆ ಜೋಡಿಯೊಂದು ಹೊಕ್ಕಿದೆ ಎಂಬ ಸುದ್ದಿ ಸ್ಥಳೀಯರಲ್ಲಿ ಹರಡಿತ್ತು. ಸ್ಥಳೀಯರೆಲ್ಲಾ ಸೇರಿಕೊಂಡು ಹುಡುಕಾಟ ನಡೆಸಿದ್ದಾರೆ. ಜನ ಜಾಲಾಡುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾಗಿದ್ದಾರೆ.
ಸ್ಥಳೀಯರು ದಾಳಿ ನಡೆಸುತ್ತಿದ್ದಂತೆ ಆ ಜೋಡಿ ಎಸ್ಕೇಪ್ ಆಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಪ್ಯಾಕ್, ಚಪ್ಪಲಿ, ಬಾಟಲಿ, ನೆಲಕ್ಕೆ ಹಾಸಿದ ಬಟ್ಟೆ ಇತ್ಯಾದಿ ವಸ್ತುಗಳು ಪತ್ತೆಯಾಗಿದೆ.
ಕೊಳ್ನಾಡು ಗ್ರಾಮದ ಸಾಲೆತ್ತೂರು-ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತಿದೆ. ಆದರೆ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಾ ಜನ ಸಾಮಾನ್ಯರ ಪಾಲಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಇದೀಗ ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಇನ್ನಾದರೂ ರಕ್ಷಿತಾರಣ್ಯ ಪರಿಸರ ಪೊದೆಪ್ರೇಮಿಗಳಿಂದ ಮುಕ್ತವಾಗಲಿ ಎಂದು ಜನ ಒತ್ತಾಯಿಸಿದ್ದಾರೆ.