ಭಾರೀ ಮಳೆ‌ ಹಿನ್ನೆಲೆ| ಜು.16ರಂದು ಹಾಸನ ಜಿಲ್ಲೆಯ ಈ ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ಹಾಸನ‌ ಜಿಲ್ಲೆಯ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಕೆರೆ ಕೊಳ್ಳಗಳು ತುಂಬಿವೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಕ್ಕಳು ಹಳ್ಳ ತೊರೆಗಳನ್ನು ದಾಟಿ ಶಾಲೆಗೆ ಬರಬೇಕಾದ ಪರಿಸ್ಥಿತಿ ಇರುವ ಕಾರಣ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ಜು.16ರಂದು ರಜೆ ಘೋಷಿಸಿ ಆದೇಶ‌ ಹೊರಡಿಸಲಾಗಿದೆ.

Ad Widget ... ..

ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಉಲ್ಲೇಖ (1) ರಂತೆ ಮಾನ್ಯ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ದಿನಾಂಕ 16/07/2024ರಂದು ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಸದರಿ ದಿನದ ತರಗತಿಗಳನ್ನು ದಿನಾಂಕ 20/07/2024 ರ ಶನಿವಾರದಂದು ಸರಿದೂಗಿಸಿಕೊಳ್ಳವಂತೆ ಸೂಚಿಸಿದೆ ಎಂದು ‌ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Ad Widget

Leave a Comment

Your email address will not be published. Required fields are marked *