ಕಾಪು ಗರುಡ ಗ್ಯಾಂಗ್ ಗೆ ಆರ್ಥಿಕ ನೆರವು| ಉಪ್ಪಿನಂಗಡಿಯ ಯುವತಿ ಈಗ ಉಡುಪಿ ಪೊಲೀಸರ ಅತಿಥಿ!!

ಸಮಗ್ರ ನ್ಯೂಸ್: ಉಡುಪಿಯ ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆರೋಪಿಯೊಬ್ಬನ ಆಪ್ತ ಯುವತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರ್ವೇಲು, ಬಾನೊಟ್ಟು ನಿವಾಸಿ ಝಕರಿಯಾ ಪತ್ನಿ ಸಫಾರ ಯಾನೆ ಸಾಜಿದ (21) ಎಂದು ಗುರುತಿಸಲಾಗಿದೆ.

. Ad Widget . Ad Widget . Ad Widget

ಗರುಡ ಗ್ಯಾಂಗ್‌ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್‌ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಸಫಾರ ಯಾನೆ ಸಾಜಿದ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಸದ್ಯ ಸಫಾರ ಯಾನೆ ಸಾಜಿದಳನ್ನು ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ.

. Ad Widget .

Leave a Comment

Your email address will not be published. Required fields are marked *