ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ರಾಶಿಗಳ ಗೋಚಾರಫಲ ತಿಳಿಯುವುದು‌ ದಿನಚರಿಗಳನ್ನು‌ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ವಾರ ದ್ವಾದಶ ರಾಶಿಗಳ ಗೋಚಾರಫಲ ಏನು? ಯಾರಿಗೆ ಲಾಭ? ಯಾರಿಗೆ ಶುಭ? ತಿಳಿಯೋಣ…

Ad Widget ... ..

ಮೇಷ ರಾಶಿ:
ಈ ವಾರ ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತೀರಿ, ಸಾಲ ತೀರಿಸಲು ಸಾಧ್ಯವಾಗುವುದು, ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ಜಾಗ್ರತೆವಹಿಸಿ. ಅನಗ್ಯತ ಒತ್ತಡ ಬೇಡ, ಸಮಯ ಬಂದಾಗ ಎಲ್ಲವೂ ಸರಿಯಾಗಲಿದೆ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.

Ad Widget

ವೃಷಭ ರಾಶಿ:
ವೃಷಭ ರಾಶಿಯವರು ಈ ವಾರ ಜಾಗ್ರತೆವಹಿಸಿ, ವಿವಾಹಿತರು ತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸಿ, ಬೇರೆಯವರ ವಿಷಯದಲ್ಲಿ ಮೂಗು ತೂರಿಸಲು ಹೋಗದಿರುವುದು ಒಳ್ಳೆಯದು. ಕೆಲಸದಲ್ಲಿ ನಿಮ್ಮಂದ ತಪ್ಪಾಗದಂತೆ ಜಾಗ್ರತೆವಹಿಸಿ. ಆರ್ಥಿಕವಾಗಿ ತೊಂದರೆಯಿಲ್ಲ, ಆದರೆ ಆರೋಗ್ಯದ ಕಡೆಗೆ ಗಮನಹರಿಸಿ.

ಮಿಥುನ ರಾಶಿ:
ಈ ವಾರ ನೀವು ಅನಗತ್ಯ ಚಿಂತೆ ತೆಗೆದು ಹಾಕಿ ಧನಾತ್ಮಕವಾಗಿ ಯೋಚಿಸಿ. ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು, ವೃತ್ತಿ ಬದುಕಿನಲ್ಲಿ ಈ ವಾರ ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ, ವೈವಾಹಿಕ ಜೀವನ ಚೆನ್ನಾಗಿರಲಿದೆ, ಈ ದಿನ ಮಾನಸಿಕ ಆರೋಗ್ಯ ಚೆನ್ನಾಗಿರಲಿದೆ.

ಕರ್ಕಾಟಕ ರಾಶಿ:
ಈ ವಾರ ಕೆಲವರು ನಿಮಗೆ ಗೊತ್ತಾಗದಂತೆ ನಿಮ್ಮಿಂದ ಲಾಭ ಪಡೆಯಲು ಪ್ರಯತ್ನಿಸಬಹುದು. ನಿಮ್ಮ ಸೀಕ್ರೆಟ್ ಯಾರ ಜೊತೆಗೂ ಹಂಚಬೇಡಿ. ಈ ವಾರ ಕೆಲಸದಲ್ಲಿ ಅಧಿಕ ಒತ್ತಡ ಇರಲಿದೆ, ಈ ಸಮಯದಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ.

ಸಿಂಹ ರಾಶಿ:
ಈ ವಾರ ನಿಮಗೆ ತುಂಬಾನೇ ಶುಭವಾಗಿದೆ, ವ್ಯಾಪಾರಿಗಳು ಉತ್ತಮ ಲಾಭ ಗಳಿಸುತ್ತೀರಿ, ಇನ್ನು ಕೆಲಸದಲ್ಲಿ ಹೊಸ ಅವಕಾಶಗಳು ಬರಲಿದೆ, ಕೆಲಸ ಬದಲಾವಣೆಗೂ ಈ ಅವಧಿ ಒಳ್ಳೆಯದಿದೆ, ವೈವಾಹಿಕ ಜೀವನದಲ್ಲಿ ಮಾನಸಿಕ ಒತ್ತಡ ಕಡಿಮೆ ಇರಲಿದೆ.

ಕನ್ಯಾ ರಾಶಿ:
ಈ ಅವಧಿಯಲ್ಲಿ ದುಡುಕಿನಿಂದ ಯಾವುದೇ ತಪ್ಪು ನಿರ್ಧಾರ ತೆಗೆದುಕೋಳ್ಳಬೇಡಿ, ಅನಗ್ಯತ ವಿಷಯದ ಕಡೆಗೆ ಗಮನಹರಿಸದೆ, ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು. ಹೂಡಿಕೆಗೆ ಈ ಅವಧಿ ಅನುಕೂಲಕರವಾಗಿದೆ, ಆರೋಗ್ಯ ಸಮಸ್ಯೆಯಿಂದಾಗಿ ಸಮಸ್ಯೆ ಹೆಚ್ಚಾಗಲಿದೆ.

ತುಲಾ ರಾಶಿ:
ವಾರದ ಆರಂಭದಲ್ಲಿ ನೀವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು . ವ್ಯಾಪಾರಸ್ಥರು ತಮ್ಮ ಕೆಲಸದ ಕಡೆಗೆ ಹೆಚ್ಚು ಗಮನಹರಿಸಬೇಕು. ಕೆಲಸದ ಒತ್ತಡ ಹೆಚ್ಚಿರಲಿದೆ.

ವೃಶ್ಚಿಕ ರಾಶಿ:
ವಾರದ ಆರಂಭದಲ್ಲಿ ಸ್ವಲ್ಪ ಹೆಚ್ಚಿನ ಖರ್ಚು ಇರಲಿದೆ. ಉದ್ಯೋಗಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವೈವಾಹಿಕ ಬದುಕಿನಲ್ಲಿನ ಭಿನ್ನಾಭಿಪ್ರಾಯ ದೂರಾಗಲಿದೆ, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯಬೇಡ.

ಧನು ರಾಶಿ:
ಈ ವಾರ ಅನುಕೂಲಕರವಾಗಿದೆ, ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸುಧಾರಣೆ ಕಂಡು ಬರುವುದು. ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯಬೇಡ, ಕುಟುಂಬ ಜೀವನ ಚೆನ್ನಾಗಿರಲಿದೆ.

ಮಕರ ರಾಶಿ:
ನೀವು ವ್ಯಾಪಾರಿಯಾಗಿದ್ದರೆ ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು, ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ವೈವಾಹಿಕ ಬದುಕಿನಲ್ಲಿ ಎಲ್ಲಾ ಭಿನ್ನಾಭಿಪ್ರಾಯ ದೂರಾಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಕುಂಭ ರಾಶಿ:
ಈ ವಾರ ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು, , ಇಲ್ಲದಿದ್ದರೆ ಸಂಬಂಧಗಳು ಹಾಳಾಗುವುದು. ನೀವು ಉದ್ಯಮಿಯಾಗಿದ್ದರೆ ನೀವು ವ್ಯವಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಉದ್ಯೋಗಿಗಳು ತಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಿದರೆ ಒಳ್ಳೆಯದು. ಆರೋಗ್ಯ ಚೆನ್ನಾಗಿರಲಿದೆ.

ಮೀನ ರಾಶಿ:
ಹಣಕಾಸಿನ ಚಿಂತೆ ಕಾಡಬಹುದು, ಉದ್ಯೋಗಿಗಳಿಗೆ ಈ ವಾರ ಬಹಳ ವಿಶೇಷವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ, ಆರೋಗ್ಯದ ಕಡೆಗೆ ಗಮನಹರಿಸಬೇಕು.

Leave a Comment

Your email address will not be published. Required fields are marked *