ಬೆಳ್ಳಾರೆ: ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ

ಸಮಗ್ರ ನ್ಯೂಸ್: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ 16ನೇ ಸಂಸ್ಥಾಪನಾ ದಿನದ ಅಂಗವಾಗಿ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

Ad Widget ... ..

ಎಸ್ ಡಿ ಪಿ ಐ ಗ್ರಾಮ ಸಮಿತಿ ಅಧ್ಯಕ್ಷ ತಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷರೂ ಸವಣೂರು ಗ್ರಾಮ ಪಂಚಾಯಿತಿ ಸದಸ್ಯರೂ ಆದ ರಝಾಕ್ ಕೆನರಾ ಧ್ವಜಾರೋಹಣ ನೆರವೇರಿಸಿದರು.
ವಿಧಾನಸಭಾ ಸಮಿತಿ ಸಂಘಟಣಾ ಕಾರ್ಯದರ್ಶಿ ಸಿದ್ದೀಕ್ ಸವಣೂರು ಪ್ರಾಸ್ತಾವಿಕ ಮಾತನಾಡಿದರು.

Ad Widget

ಸಭೆಯಲ್ಲಿ ಎಸ್ ಡಿ ಪಿ ಐ ವಿಧಾನಸಭಾ ಸಮಿತಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಶರೀಫ್ .ಎನ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಹಮೀದ್ ಮರಕ್ಕಡ ಸ್ವಾಗತಿಸಿ, ಹಾರಿಸ್ ಬೆಳ್ಳಾರೆ ವಂದಿಸಿದರು.

Leave a Comment

Your email address will not be published. Required fields are marked *