ಭದ್ರತಾ ಸಲಹೆಗಾರರಾಗಿ ಮತ್ತೆ ನೇಮಕಗೊಂಡ ಅಜಿತ್ ದೋವಲ್

ಸಮಗ್ರ ನ್ಯೂಸ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಅವರನ್ನು ಕೇಂದ್ರ ಸರ್ಕಾರವು ಮೂರನೇ ಅವಧಿಗೂ ಸಲಹೆಗಾರರನ್ನಾಗಿ ನೇಮಕ ಮಾಡಿದೆ . ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ ಅವರೇ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Ad Widget ... ..

ಅಜಿತ್ ದೋವಲ್ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಆದೇಶ ಹೊರಡಿಸಿದೆ.

Ad Widget

ನೂತನ ಆದೇಶದ ಪ್ರಕಾರ, ಅಜಿತ್ ದೋವಲ್ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ ಅಥವಾ ಮುಂದಿನ ಆದೇಶದವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇರಲಿದ್ದಾರೆ. ಇದೇ ನಿಯಮವು ಪಿ.ಕೆ.ಮಿಶ್ರಾ ಅವರಿಗೂ ಅನ್ವಯವಾಗಲಿದೆ ಎಂದು ತಿಳಿಸಿವೆ.

Leave a Comment

Your email address will not be published. Required fields are marked *