ಆಳಿವೆ ಬಾಗಿಲ ಬಳಿ ದೋಣಿ ಅವಘಡ: ಮೀನುಗಾರರು ಅಪಾಯದಿಂದ ಪಾರು

ಗಂಗೊಳ್ಳಿ,: ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆ ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲ ಬಳಿ ಭಾನುವಾರ ದೋಣಿ ಅವಘಡ ಉಂಟಾಗಿ ನಾಲ್ವರು ಮೀನುಗಾರರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

Ad Widget ... ..

ಜಿ.ಪ್ರಕಾಶ್ ಮಾಲಕತ್ವದ ಪರಶಕ್ತಿ ಹೆಸರಿನ ದೋಣಿಯಲ್ಲಿ ನಾಲ್ವರು ಮೀನುಗಾರರು ಬಲೆಯನ್ನು ತುಂಬಿಸಿಕೊಂಡು ಮೀನುಗಾರಿಕೆ ತೆರಳುತ್ತಿದ್ದರು. ಈ ವೇಳೆ ನೀರು ದೋಣಿಯೊಳಗೆ ಬಂದು ಮಗುಚಿ ಬಲೆ ನೀರಿನಲ್ಲಿ ಮುಳುಗಿದೆ. ಬಳಿಕ ಎರಡು ಯಾಂತ್ರಿಕೃತ ದೋಣಿಗಳ ಸಹಾಯದಿಂದ ದೋಣಿಯನ್ನು ದಡಕ್ಕೆ ತರಲಾಗಿದೆ.

Ad Widget

ಅನೇಕ ವರ್ಷಗಳಿಂದ ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ಮಾಡದೇ ಹೂಳು ತುಂಬಿಕೊಂಡಿದೆ. ಸಮಸ್ಯೆಯ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಮೀನುಗಾರರು ಗೋಳುತೋಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *