ದ.ಕನ್ನಡದಲ್ಲಿ ಬಿಜೆಪಿಗೆ ಭರ್ಜರಿ ಜಯ| ಕ್ಯಾಪ್ಟನ್ ಬ್ರಿಜೇಶ್ ಚೌಟಾ ಇನ್ಮುಂದೆ ಮಂಗಳೂರು ಎಂಪಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರ ಅಪಾರ ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕದ ಬಲಿಷ್ಠ ಲೋಕ ಸಭಾ ಕ್ಷೇತ್ರವಾಗಿರುವ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್​ ಚೌಟ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪದ್ಮರಾಜ್​ ವಿರುದ್ಧ ಭರ್ಜರಿ ಮತಗಳ ಅಂತರದ ವಿಜಯ ಸಾಧಿಸಿದ್ದಾರೆ.

Ad Widget ... ..

ಈ ಮೂಲಕ ಕೇಸರಿ ಪಕ್ಷ ಪಾರಮ್ಯ ಇಲ್ಲಿ ಮುಂದುವರಿದಿದೆ. ಆಡಳಿತ ವಿರೋಧಿ ಅಲೆಯನ್ನು ಮೀರುವ ಬಿಜೆಪಿಯ ತಂತ್ರ ಫಲಿಸಿದ್ದು, ಹೊಸ ಮುಖವೊಂದು ಪಾರ್ಲಿಮೆಂಟ್​ಗೆ ಏರಿದೆ.

Ad Widget

ಬಿಜೆಪಿ, ವಿಶೇಷವಾಗಿ ನರೇಂದ್ರ ಮೋದಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಜನಪ್ರಿಯ. ಪಕ್ಷವು ತನ್ನ ಮತದಾರರ ನೆಲೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೆಳಗಿಳಿಸುವ ಮೂಲಕ ಬಿಜೆಪಿ ಆಡಳಿತ ವಿರೋಧಿ ಅಂಶಗಳನ್ನು ತೆಗೆದುಹಾಕಿತ್ತು.

Leave a Comment

Your email address will not be published. Required fields are marked *