ಸುಂಟಿಕೊಪ್ಪ:ಕಾಫಿತೋಟದಲ್ಲಿ ಕಾಡಾನೆ ಸಾವು

ಸಮಗ್ರ ನ್ಯೂಸ್: ಸುಂಟಿಕೊಪ್ಪ ಸಮೀಪದ ಹೊಸಕೋಟೆ ಬಳಿಯ ಕಾಫಿ ತೋಟವೊಂದರಲ್ಲಿ ಅಂದಾಜು 20 ವರ್ಷ ಪ್ರಾಯದ ಮಖನ ಆನೆ ಸಾವನ್ನಪ್ಪಿದ ಘಟನೆ ನಡೆದಿದೆ.

Ad Widget ... ..

ಆನೆಕಾಡು ಅರಣ್ಯ ಸಮೀಪದಲ್ಲಿರುವ ಕಾಫಿ ತೋಟದಲ್ಲಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಡಿಎಫ್ಓ ಭಾಸ್ಕರ್, ಎಸಿಎಫ್ ಗೋಪಾಲ್, ಆರ್ ಎಫ್ಓ ರತನ್, ಡಿಆರ್ಎಫ್ಓ ದೇವಯ್ಯ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

ವನ್ಯಜೀವಿ ವೈದ್ಯರಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ನಿಖರ ಮಾಹಿತಿ ಲಭ್ಯವಾಗಬೇಕಿದೆ. ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ತಡೆ ನೀಡಲು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *