ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಿ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಆದೇಶ ಹೊರಡಿಸಲಾಗಿದೆ.

Ad Widget ... ..

ಈಗಾಗಲೇ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಪೋನ್ ಗಳನ್ನು ನಿಷೇಧಿಸಲಾಗಿದ್ದು, ಇದೀಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಪೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

Ad Widget

ಐಜಿ ಹಾಗೂ ರಾಮಮಂದಿರ ಟ್ರಸ್ಟ್ ಅಧಿಕಾರಿ ಆಯುಕ್ತರ ಜತೆಗಿನ ಸಭೆಯಲ್ಲಿ ಮೊಬೈಲ್ ಪೋನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಎಲ್ಲ ಸಂದರ್ಶಕರು ಈ ಒಪ್ಪಂದಕ್ಕೆ ಬದ್ಧರಾಗಿ ಮತ್ತು ಯಾರಿಗೂ ತೊಂದರೆಯಾಗದಂತೆ ಸಹಕರಿಸಲು ವಿನಂತಿಸಲಾಗಿದೆ.

Leave a Comment

Your email address will not be published. Required fields are marked *