ಸಮಗ್ರ ನ್ಯೂಸ್: ಮೈಸೂರು ಅರಮನೆ ಪ್ರವೇಶ ಟಿಕೆಟ್ ಹಾಗೂ ಪಾರ್ಕಿಂಗ್ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಇಂದು ಮೈಸೂರು ಅರಮನೆ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಈ ವೇಳೆ ಪ್ರವೇಶ ದ್ವಾರ, ಪಾರ್ಕಿಂಗ್ ಲಾಟ್ನಲ್ಲಿ ಲೆಕ್ಕಕ್ಕೆ ಸಿಗದ 4.10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ದೂರು ಆಧರಿಸಿ ಲೋಕಾಯುಕ್ತ ಎಸ್ಪಿ ಸಚಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮ ಹಣವನ್ನ ಜಪ್ತಿ ಮಾಡಲಾಗಿದೆ. ಇನ್ನು ಕಾರ್ಯಾಚರಣೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.