Ad Widget .

ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ರಾರಾಜಿಸಲಿದೆ ಕನ್ನಡಿಗರ ಹೆಮ್ಮೆಯ ‘ನಂದಿನಿ’

ಸಮಗ್ರ ನ್ಯೂಸ್: ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಲಾಂಛನ ಐಲೆರ್ಂಡ್ ಮತ್ತು ಸ್ಕಾಟ್ಲೆಂಡ್ ಆಟಗಾರರ ಜೆರ್ಸಿಯ ಮೇಲೆ ರಾರಾಜಿಸಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ತಿಳಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜೂ.1ರಿಂದ 29ರವರೆಗೆ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯು ಅಮೆರಿಕ, ವೆಸ್ಟ್‍ಇಂಡೀಸ್‍ನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕೆಎಂಎಫ್ ಐಲೆರ್ಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದೆ. ಈ ತಂಡಗಳ ಆಟಗಾರರ ಜೆರ್ಸಿಯಲ್ಲಿ ಬಲಗೈ ಆಟಗಾರನ ಎಡ ತೋಳಿನ ಮೇಲೆ ಮತ್ತು ಎಡಗೈ ಆಟಗಾರನ ಬಲ ತೋಳಿನ ಮೇಲೆ ಕೆಎಂಎಫ್ ಲಾಂಛನ ಇರಲಿದೆ. ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ನಂದಿನಿ ಎಂದು ಬರೆದ ಲಾಂಛನ ಇದಾಗಿರಲಿದೆ ಎಂದು ಅವರು ತಿಳಿಸಿದರು.

Ad Widget . Ad Widget . Ad Widget .

ಸ್ಕಾಟ್ಲೆಂಡ್ ಮತ್ತು ಐಲೆರ್ಂಡ್ ತಂಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ತಾಣಗಳಲ್ಲಿ ನಡೆಸುವ ಅಭಿಯಾನ, ಫೆÇೀಟೋಶೂಟ್‍ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕಪ್ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ. ಹಾಗೆಯೇ ವಿಶ್ವಕಪ್ ವೇಳೆ ಕೆಎಂಎಫ್‍ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದ್ದು, ಕರ್ನಾಟಕದ ಬ್ರ್ಯಾಂಡ್‍ಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು. ಜಾಗತಿಕ ಮಟ್ಟದಲ್ಲಿ ಈಗಾಗಲೇ ನಂದಿನಿ ಉತ್ಪನ್ನ ದೊರೆಯುತ್ತಿದೆ. ದುಬೈನಲ್ಲಿ ನಂದಿನಿ ಮಳಿಗೆ ತೆರೆಯಲಾಗಿದೆ. ಇನ್ನು ಎರಡು ಮಳಿಗೆಗಳನ್ನು ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಮೆರಿಕಗೆ ನಂದಿನಿ ಹಾಲಿನ ಸಿಹಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿದ್ದು ಇದರ ಪ್ರಮಾಣವನ್ನು ಇನ್ನು ಹೆಚ್ಚು ಮಾಡುತ್ತಿದ್ದೇವೆ. ಇಲ್ಲಿ ಹೋಟೆಲ್ ಸ್ಟೋರ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು 700 ಔಟ್‍ಲೆಟ್‍ಗಳಲ್ಲಿ ನಂದಿನಿ ಉತ್ಪನ್ನಗಳು ದೊರೆಯುವಂತೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *