ಸಾತೊಡ್ಡಿ ಜಲಪಾತ ವೀಕ್ಷಿಸಲು ಗುರುತು ಚೀಟಿ ಕಡ್ಡಾಯ/ ಪ್ರವಾಸಿಗರಿಗೆ ಸೂಚನೆ

ಸಮಗ್ರ ನ್ಯೂಸ್: ಯಲ್ಲಾಪುರ ತಾಲೂಕಿನ ಪ್ರಸಿದ್ಧ ಸಾತೊಡ್ಡಿ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಆಧಾರ ಕಾರ್ಡ, ವಾಹನದ ಲೈಸೆನ್ಸ, ಮತದಾರರ ಗುರುತಿನಚೀಟಿ ಸೇರದಂತೆ ಯಾವುದಾದರೂ ಒಂದು ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದ್ದು, ಪ್ರವಾಸಿಗರು ಸಹಕರಿಸಬೇಕು ಎಂದು ಗ್ರಾಮ ಅರಣ್ಯ ಸಮಿತಿ . ಅಧ್ಯಕ್ಷ ನಾರಾಯಣ ಭಟ್ ಕಂಚಿನಗದ್ದೆ ವಿನಂತಿಸಿಕೊಂಡಿದ್ದಾರೆ.

Ad Widget ... ..

ಸಾತೊಡ್ಡಿ ಜಲಪಾತದಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಇದರಿಂದಾಗಿ ಸಾತೊಡ್ಡಿಗೆ ತೆರಳುವ ಮಾರ್ಗದ ಬಿಸಗೋಡ ಕ್ರಾಸ್‌ನಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿಯಿಂದ ಸಾತೋಡಿ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಕುರಿತು ಮಾಹಿತಿ ನೀಡುವ ಬ್ಯಾನರನ್ನು ಆಳವಡಿಸಿದ್ದಾರೆ.

Ad Widget

Leave a Comment

Your email address will not be published. Required fields are marked *