Ad Widget .

ದಿಢೀರ್ ಕುಸಿತ ಕಂಡ ಕೋಕೋ ಧಾರಣೆ| ಕೆಜಿ ದರದಲ್ಲಿ ₹35 ಇಳಿಕೆ

ಸಮಗ್ರ ನ್ಯೂಸ್: ವಿಪರೀತ ಧಾರಣೆ‌ ಕಂಡಿದ್ದ ಕೊಕ್ಕೋ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಸಾಧಾರಣವಾಗಿ 60-70 ರೂಪಾಯಿ ಆಸುಪಾಸಿನಲ್ಲಿದ್ದ ಧಾರಣೆ ₹ 325 ವರೆಗೂ ಹೋಗಿತ್ತು. ಇದೀಗ ಮತ್ತೆ ಕುಸಿತ ಕಂಡಿದ್ದು 290 ರೂಪಾಯಿಗೆ ಇಳಿಕೆಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಸಿ ಕೊಕ್ಕೋ ಧಾರಣೆ 325 ರೂಪಾಯಿವರೆಗೆ ಏರಿಕೆ ಕಂಡಿದ್ದರೆ, ಒಣ ಕೊಕೊ ಧಾರಣೆ 900 ರೂಪಾಯಿ ಆಸುಪಾಸಿಗೆ ಬಂದಿತ್ತು. ಇದೀಗ ಧಾರಣೆ ಇಳಿಕೆಯಾಗಿದೆ. ಹಸಿ ಕೊಕ್ಕೋ ಧಾರಣೆ 290 ರೂಪಾಯಿಗೆ ಇಳಿಕೆಯಾಗಿದೆ.

Ad Widget . Ad Widget . Ad Widget .

ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಕೊಕೊ ಪ್ರಮುಖವಾಗಿ ಆಫ್ರಿಕಾ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಕಡೆಗೆ ರಫ್ತು ಕೂಡಾ ಮಾಡುತ್ತದೆ. ಭಾರತವೂ ಕೂಡಾ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಚೆಗೆ ಕೊಕೋಗೆ ವೈರಸ್ ರೋಗದ ದಾಳಿಗೆ ಒಳಗಾಗಿ ಬೆಳೆ ನಾಶವಾಗಿದೆ. ಕೆಲವು ವರ್ಷಗಳ ಮಟ್ಟಿಗೆ ಬೆಳೆ ತೆಗೆಯಲು ಸಾಧ್ಯವಾಗದೇ ಇರುವುದು ಇಲ್ಲಿನ ಕೊಕೋಗೆ ಬೇಡಿಕೆ ಹೆಚ್ಚಾಗಿದೆ, ಧಾರಣೆ ಏರಿಕೆಯಾಯಿತು.

ಕೊಕೊ ಬೆಳೆಯುವ ಪ್ರಮುಖ ಪ್ರದೇಶಗಳಾದ ಪಶ್ಚಿಮ ಆಫ್ರಿಕಾ, ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಶಾಂತಿಸಾಗರ ಪ್ರದೇಶಗಳು ಹವಾಮಾನ ಬದಲಾವಣೆ ಮತ್ತು ಕೀಟಗಳು ಹಾಗೂ ವಿವಿಧ ವೈರಸ್ ಕಾಯಿಲೆಗಳಿಗೆ ಒಳಗಾಗಿವೆ.

2012 ರಲ್ಲಿಯೇ ಕೊಕೋ ಬೆಳೆಗೆ ಬೇಡಿಕೆ ಇರುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದರು. ಪ್ರಪಂಚದ ಎಲ್ಲಾ ಕಡೆಯಲ್ಲೂ ಕೊಕೋಗೆ ಬೇಡಿಕೆ ಇದೆ, ಒಂದು ವೇಳೆ ರೋಗ ಬಂದರೆ ತಕ್ಷಣವೇ ಕೊಕೋ ಕೊರತೆಯೂ ಆಗಲಿದೆ ಎಂದೂ ಎಚ್ಚರಿಸಿದ್ದರು. ಆದರೆ ಇತರ ಬೆಲೆಗಳ ನಡುವೆ ಕೊಕೋ ನಿರ್ಲಕ್ಷ್ಯವಾಗಿತ್ತು.

ತಜ್ಞರ ಪ್ರಕಾರ 2020ರ ಹೊತ್ತಿಗೆ ಶೇ. 25ರಷ್ಟು ಕೊಕೋ ಬಳಕೆ ಹೆಚ್ಚಾಗಲಿದೆ ಎಂದು 2012 ರಲ್ಲಿ ಹೇಳಿದ್ದರು. ಅದು ನಿರೀಕ್ಷೆಗೂ ಮೀರಿ ಬೆಳೆದಿತ್ತು 2020 ರ ವೇಳೆಗೆ ಶೇ.40 ರಷ್ಟು ಬೇಡಿಕೆ ಕಂಡುಬಂದಿತ್ತು, ಚಾಕೋಲೇಟ್‌ ಬಳಕೆ ಹೆಚ್ಚಾಗಿತ್ತು. ಆದರೆ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಕೊಕೊ ಕೃಷಿಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕೊಕೊ ಕೃಷಿ ಈಗಲೂ ಬಹುತೇಕ ಎಲ್ಲೆಡೆ ಅಸ್ಥಿರತೆ ಮುಂದುವರಿದಿದೆ. ಜಗತ್ತಿನಾದ್ಯಂತ ಕೃಷಿಕರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕೊಕೋಗೆ ಬೇಡಿಕೆ ಇರಲಿದೆ. ಸದ್ಯ ಮಳೆ ಹಾಗೂ ಹವಾಮಾನದ ಕಾರಣಗಳಿಂದ ಧಾರಣೆಯಲ್ಲಿ ಸ್ವಲ್ಪ ಏರಿಳಿತ ಕಂಡಿದೆ.

Leave a Comment

Your email address will not be published. Required fields are marked *