ತುಮಕೂರು:ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ದಿಢೀರ್‌ ಹೃದಯಾಘಾತ

ಸಮಗ್ರ ನ್ಯೂಸ್‌ : ಮತ ಚಲಾಯಿಸಿ ಮನೆಗೆ ಬಂದವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ನಡೆದಿದೆ.

Ad Widget ... ..

54 ವರ್ಷದ ರಮೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರಿಗೆ ತುಮಕೂರು ನಗರದಲ್ಲಿ ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.

Ad Widget

ರಮೇಶ್ ಅವರು ಇಂದು ಬೆಳಗ್ಗೆ ತುಮಕೂರು ನಗರದ ಎಸ್.ಎಸ್ ಪುರಂನಲ್ಲಿರುವ ಮತಗಟ್ಟೆಗೆ ತೆರಳಿದ್ದರು. ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಹೋಗಿದ್ದ ರಮೇಶ್ ಅವರು ಮತ ಚಲಾಯಿಸಿ ಬಂದಿದ್ದರು.

ಬಟ್ಟೆ ವ್ಯಾಪಾರಿ ರಮೇಶ್ ಅವರು ಮತದಾನ ಮುಗಿಸಿ ಮನೆಗೆ ವಾಪಸಾಗುತ್ತಿದ್ದಂತೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಮೇಶ್ ಅವರು ಬದುಕುಳಿದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *