6 ವರ್ಷದ ಬಾಲಕಿ‌ ಮೇಲೆ ಕಾಮುಕನಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಏನು ಅರಿಯದ ಬಾಲಕಿ ಮೇಲೆ ಕಾಮುಕನೊಬ್ಬ ದೌರ್ಜನ್ಯವನ್ನು ನಡೆಸಿದ್ದಾನೆ. 6 ವರ್ಷದ ಬಾಲಕಿ‌ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ ನಡೆದಿದೆ.

Ad Widget ... ..

ಪಶ್ಚಿಮ ಬಂಗಾಳ‌ ಮೂಲದ ಮಮಜನ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸಂತ್ರಸ್ತ ಬಾಲಕಿ‌ ಕುಟುಂಬ ಹಾಗೂ ಆರೋಪಿ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಬಾಲಕಿ ತಂದೆ ಹಾಲು ತರಲು ಹೊರಗೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಯಾರು ಇಲ್ಲದಿರುವುದು ತಿಳಿಯುತ್ತಿದ್ದಂತೆ ಈ ಮಮಜನ್‌ ಮನೆಯೊಳಗೆ ನುಗ್ಗಿ ಬಾಲಕಿ‌ ಮೇಲೆ ಲೈಂಗಿಕ‌ ದೌರ್ಜನ್ಯವೆಸಗಿದ್ದಾನೆ. ಪೋಷಕರು ಮನೆಗೆ ವಾಪಸ್‌ ಬಂದಾಗ ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ.

Ad Widget

ಕೂಡಲೇ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *