ಉಡುಪಿ: ಮಹಿಳೆಯರಿಗೆ ಚೊಂಬು ಕೊಟ್ಟಿದ್ದೆ ಕಾಂಗ್ರೆಸ್ ಸಾಧನೆ-ಸುನಿಲ್ ಕುಮಾರ್ ಲೇವಡಿ

ಸಮಗ್ರ ನ್ಯೂಸ್ : ಶೌಚಾಲಯ ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟದ್ದು ಕಾಂಗ್ರೆಸ್ ನ ಸಾಧನೆ. ಸ್ವಾತಂತ್ರ್ಯ ನಂತರ ದೊಡ್ಡ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ. ಮೋದಿ ಸರಕಾರವು ದೇಶದಲ್ಲಿ ಚೊಂಬು ರಹಿತ ಆಡಳಿತ ಕೊಟ್ಟಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.

Ad Widget ... ..

ಕಾಂಗ್ರೆಸ್ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಸರಕಾರದ ಸಾಧನೆಗಳನ್ನು ಜಾಹೀರಾತು ಕೊಡುವ ಮೂಲಕ ಕಾಂಗ್ರೆಸ್ ಪರೋಕ್ಷವಾಗಿ ಒಪ್ಪಿಕೊಂಡಿದೆ. ಕೇಸರಿ ಶಾಲು ಹಾಕಲು ನಮಗೆ ಸಂಕೋಚ ಇಲ್ಲ.

Ad Widget

ನಾವು ದೇಶದಲ್ಲಿ ಕೇಸರಿ ಆಡಳಿತ ನಿರ್ಮಾಣ ಮಾಡಲು ಹೊರಟಿದ್ದೇವೆ. ಕೇಸರಿ ಭಾರತೀಯ ಸಂಸ್ಕೃತಿಯ ಪ್ರತೀಕ. ಕೇಸರಿ ರಾಷ್ಟ್ರೀಯತೆ ಪ್ರತೀಕ, ನಾವು ಯಾವುದೇ ದ್ವೇಷ ಮಾಡಲು ಹೊರಟಿಲ್ಲ. ಕಾಂಗ್ರೆಸ್ ಒಂದು ಕೋಮಿನ ಜನಕ್ಕೆ ಬೆಂಬಲ ಕೊಡುತ್ತದೆ. ಒಂದು ವರ್ಗವನ್ನು ವಿರೋಧಿಸುವುದೇ ಕಾಂಗ್ರೆಸ್ ನ ನಿಲುವು ಎಂದು ಟೀಕಿಸಿದರು.

Leave a Comment

Your email address will not be published. Required fields are marked *