ಕೊಲೊಂಬೊ: ಕಾರ್ ರೇಸ್ ವೇಳೆ ಅಪಘಾತ|ಏಳು ಮಂದಿ ಸಾವು

ಸಮಗ್ರ ನ್ಯೂಸ್ : ಮೋಟಾರ್ ಕಾರ್ ರೇಸಿಂಗ್ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget ... ..

8 ವರ್ಷದ ಬಾಲಕ ಹಾಗೂ ನಾಲ್ವರು ಟ್ರ್ಯಾಕ್ ಸಹಾಯಕರು ಸೇರಿ 7 ಮಂದಿ ಮೃತಪಟ್ಟಿದ್ದಾರೆ.

Ad Widget

ದೀಯತಲಾವದ ಸೆಂಟ್ರಲ್ ಹಿಲ್ ರೆಸಾರ್ಟ್ನಲ್ಲಿ ನಡೆದ ರೇಸ್ನಲ್ಲಿ ಕಾರೊಂದು ಟ್ರ್ಯಾಕ್ನಿಂದ ಪಲ್ಟಿಯಾಗಿ ಪ್ರೇಕ್ಷಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 23 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *