ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್ ಪತ್ತೆ

ಸಮಗ್ರ ನ್ಯೂಸ್: ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಹಾಗೂ ಬ್ಯಾಗ್‌ ಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ಚಂದ್ರಶೇಖರ್‌ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ.

Ad Widget ... ..

ಚಂದ್ರಶೇಖರ್‌ ಅವರು ಎ. 19ರಂದು ಸ್ಥಳೀಯ ನಿವಾಸಿಗಳೊಂದಿಗೆ ಕಾಡಿಗೆ ಸೌದೆ ತರಲು ತೆರಳುವ ವೇಳೆ ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಷದಲ್ಲಿರುವ ರಕ್ಷಿತಾರಣ್ಯದಲ್ಲಿ ತೆರಳುತ್ತಿದ್ದಾಗ ದಾರಿಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಬ್ಯಾಗ್‌ ಕಂಡುಬಂದಿತ್ತು.

Ad Widget

ಸ್ವಲ್ಪ ದೂರದಲ್ಲಿ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುತ್ತಿತ್ತು. ಕಾಡು ಪ್ರದೇಶದಲ್ಲಿ ಕೊಳೆತ ಮೃತದೇಹ ದೊರಕಿರುವ ಬಗ್ಗೆ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *