ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ CCB ಇನ್ಸ್​ಪೆಕ್ಟರ್ ಅಮಾನತು

ಸಮಗ್ರ ನ್ಯೂಸ್: ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಅಪರಾಧ ಕೇಂದ್ರ ವಿಭಾಗ (CCB)ಯ ರೌಡಿ ನಿಗ್ರಹದಳದ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ಅವರನ್ನು ಅಮಾನತು ಮಾಡಲಾಗಿದೆ.

Ad Widget ... ..

ಇವರನ್ನು ಪ್ರತಿ ವಿಭಾಗದ ನಟೋರಿಯಸ್ ರೌಡಿಗಳ ಮಾಹಿತಿ ಕಲೆ ಹಾಕಿ, ವರದಿ ನೀಡುವಂತೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಹಾಗೆ ಅಧಿಕಾರಿಗಳು ರೌಡಿಶೀಟರ್ ಕಾಡುಬೀಸನಹಳ್ಳಿ ರೋಹಿತ್ ಚಲನವನ ಬಗ್ಗೆ ವರದಿ ಕೇಳಿದ್ದರು. ಆದರೆ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ಅವರು ರೌಡಿಶೀಟರ್ ರೋಹಿತ್ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದೆ, ವರದಿ ನೀಡಿರಲಿಲ್ಲ. ಹೀಗಾಗಿ ಸಿಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ವಿರುದ್ಧ ಪೊಲೀಸ್ ಆಯುಕ್ತ ವರದಿ ನೀಡುತ್ತಾರೆ. ವರದಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತರು ಅಮಾನತು ಮಾಡಿ ಆದೇಶ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *