ಸಮಗ್ರ ನ್ಯೂಸ್: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ಸುಳ್ಯ ನಗರ ಶ್ರೀರಾಮ್ ಪೇಟೆಯಲ್ಲಿ ನಡೆದಿದೆ.
ಓಮ್ನಿ ಹಾಗೂ ಸಿಲಾರಿಯೋ ಕಾರುಗಳ ನಡುವೆ ನಡುರಸ್ತೆಯಲ್ಲೇ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






