ದೋಣಿ ಮಗುಚಿ ಇಬ್ಬರು ಸಾವು| ಏಳು ಮಂದಿ ನಾಪತ್ತೆ

ಸಮಗ್ರ ನ್ಯೂಸ್: ಒಡಿಶಾದ ಜಾರ್ಸುಗುಡ ಜಿಲ್ಲೆಯ ಮಹಾನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, ಏಳು ಮಂದಿ ನಾಪತ್ತೆಯಾದ ಘಟನೆ ನಡೆದಿದೆ.

Ad Widget ... ..

ಈ ದೋಣಿ ಸುಮಾರು 50 ಪ್ರಯಾಣಿಕರನ್ನು ಹೊತ್ತು ಪಥರ್ಸೇನಿ ಕುಡಾದಿಂದ ಬಾರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಜಾರ್ಸುಗುಡ ಜಿಲ್ಲೆಯ ರೆಂಗಲಿ ಪೊಲೀಸ್ ಠಾಣೆಯ ಶಾರದಾ ಘಾಟ್ ತಲುಪುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮೀನುಗಾರರು 35 ಪ್ರಯಾಣಿಕರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಇನ್ನೂ ಏಳು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಇತರ ಏಳು ಪ್ರಯಾಣಿಕರು ಇನ್ನೂ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *