ವಿಜಯಪುರ : ಸಿಡಿಲು ಬಡಿದು ಐತಿಹಾಸಿಕ ಮೆಹತರ ಮಹಲ್ ಗೆ ಹಾನಿ

ಸಮಗ್ರ ನ್ಯೂಸ್‌ : ಗುಮ್ಮಟ ನಗರಿ ವಿಜಯಪುರದಲ್ಲಿ ಸಂಜೆ ಸುರಿದ ಸಿಡಿಲು ಸಹಿತ ಮಳೆಗೆ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೆಹತರ ಮಹಲ್ ಗೆ ಸ್ವಲ್ಪ ಹಾನಿಯಾಗಿದ್ದು, ಒಂದು ಕಾರು, ಎರಡು ಬೈಕುಗಳು ಜಖಂ ಗೊಂಡಿವೆ.

Ad Widget ... ..

ಸಂಜೆ ಗಾಳಿ, ಗುಡುಗು ಮತ್ತು ಸಿಡಿಲು ಸಹಿತ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಮೆಹತರ ಮಹಲ್ ನ ಮಿನಾರ್ ವೊಂದರ ಮೇಲ್ಭಾಗದಲ್ಲಿ ಮಿಂಚು ಸಹಿತ ಸಿಡಿಲು ಬಡಿದಿದ್ದು, ಆ ಭಾಗದ ಕಲ್ಲುಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ಸ್ಮಾರಕದ ಎದುರು ನಿಲ್ಲಿಸಲಾಗಿದ್ದ ಒಂದು ಕಾರು ಮತ್ತು ಎರಡು ಬೈಕ್ ಗಳು ಜಖಂ ಗೊಂಡಿವೆ. ಅದೃಷ್ಠವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

Ad Widget

ಉತ್ತರ ದಿಕ್ಕಿಗೆ ಮುಖ ಮಾಡಿರುವ ಈ ಸ್ಮಾರಕ ಬಲಭಾಗದಲ್ಲಿರುವ ಮಿನಾರ್ ನ ಮೇಲ್ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.ಆದಿಲ್ ಶಾಹಿ ಕಾಲದಲ್ಲಿ ಎರಡನೇ ಅಲಿ ಆದಿಲ್ ಶಾಹಿ 17ನೇ ಶತಮಾನದಲ್ಲಿ ಈ ಸ್ಮಾರಕ ನಿರ್ಮಿಸಿದ್ದಾರೆ.

Leave a Comment

Your email address will not be published. Required fields are marked *