ಚೀಟಿ ಹಣ ಎತ್ತಿಕೊಂಡು ದಂಪತಿ ಪರಾರಿ| ಹಣ ವಾಪಸ್ ಕೊಡಿಸುವಂತೆ ಪೋಲಿಸ್ ಠಾಣೆ ಮುಂದೆ ಚೀಟಿದಾರರ ದೌಡು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಚೀಟಿ ಹಣ ಗುಳುಂ ಮಾಡಿ ಇಡೀ ಕುಟುಂಬವೇ ಪರಾರಿ ಆದ ಘಟನೆ ನಡೆದಿದೆ. ಮಧ್ಯಮ ವರ್ಗದವರನ್ನೇ ಟಾರ್ಗೆಟ್‌ ಮಾಡುತ್ತಿದ್ದ ವಂಚಕ ದಂಪತಿ ಮಾತುಗಳಿಂದಲೆ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದರು. ನಂತರ ಲಕ್ಷಾಂತರ ರೂಪಾಯಿ ಚೀಟಿ ಹೆಸರಿನಲ್ಲಿ ಹಾಕಿಸಿಕೊಂಡು ಪರಾರಿಯಾಗುತ್ತಿದ್ದರು. ಈಗ ಚೀಟಿ ಹಣ ವಾಪಸ್‌ ಕೊಡಿಸುವಂತೆ ಚೀಟಿದಾರರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ.

Ad Widget ... ..

ಬ್ಯಾಡರಹಳ್ಳಿ ಪೊಲೀಸ್ ಠಾಣಾ ಮುಂದೆ 50ಕ್ಕೂ ಹೆಚ್ಚು ಜನ ಜಮಾಯಿಸಿ ಪ್ರತಿಭಟಿಸಿದ್ದಾರೆ. ಸಿದ್ದಲಿಂಗಯ್ಯ ಎಂಬಾತ ಶ್ರೀ ಸಾಯಿ ಲಕ್ಷ್ಮಿ ಕೃಪೆ ಚಿಟ್ಸ್‌ ಹೆಸರಿನಲ್ಲಿ ಚಿಟ್‌ ಕಂಪೆನಿಯನ್ನು ನಡೆಸುತ್ತಿದ್ದ. ಇದರಲ್ಲಿ 10, 12, 15 ಹಾಗೂ 16 ಲಕ್ಷ ರೂ. ಹೀಗೆ ಹಲವಾರು ಬಗೆಯಲ್ಲಿ ಚೀಟಿಯನ್ನು ನಡೆಸುತ್ತಿದ್ದ. ನಮ್ಮ ಸಂಸ್ಥೆಯಲ್ಲಿ ಚೀಟಿ ಹಾಕಿದರೆ ನಿಮಗೆ ಅಪಾರವಾದ ಲಾಭವನ್ನು ಮಾಡಿಕೊಡುತ್ತೆವೆ ಅಂದಿದ್ದ. ಸಿದ್ದಲಿಂಗಯ್ಯನನ್ನು ನಂಬಿದ ಜನರು ಲಕ್ಷಾಂತರ ರೂ. ಚೀಟಿ ಹಾಕಿದ್ದಾರೆ.

Ad Widget

ಆದರೆ ಮೊನ್ನೆ ಇದ್ದಕ್ಕಿದ್ದಂತೆ ಸಿದ್ದಲಿಂಗಯ್ಯನ ಕುಟುಂಬದವರು ಯಾರಿಗೂ ಹೇಳದಂತೆ ಮನೆ ಖಾಲಿ ಮಾಡಿದ್ದಾರೆ. ಇದರಿಂದ ಕಂಗಲಾದ ಚೀಟಿದಾರರು ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ದೂರು‌ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಲೆಮರೆಸಿಕೊಂಡಿದ್ದ ಸಿದ್ದಲಿಂಗಯ್ಯ ಹಾಗೂ ಅವರ ಪತ್ನಿ ಪ್ರೇಮಕುಮಾರಿ ಎಂಬವರನ್ನು ಬಂಧಿಸಿದ್ದಾರೆ. ಇತ್ತ ಚೀಟಿ ಹಣ ಕೊಡಿಸುವಂತೆ ಠಾಣೆ ಮುಂದೆ ಚೀಟಿದಾರರು ಪ್ರತಿಭಟನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *