‘ಚಿಕ್ಕಬಳ್ಳಾಪುರ ಜಿಲ್ಲೆಗೆ ನಾನೇ ಪವನ್ ಕಲ್ಯಾಣ್’:ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್:ಲೋಕ ಚುನಾವಣೆ ಹಿನ್ನೆಲೆ ಪ್ರಚಾರದ ಅಬ್ಬರ ಜೋರಾಗಿದ್ದು, ಆಯಾ ಪಕ್ಷದ ನಾಯಕರು ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ರೀತಿ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಪರ ನಟ ಪವನ್ ಕಲ್ಯಾಣ್ ಪ್ರಚಾರ ಮಾಡುತ್ತಾರೆ ಎಂಬ ಮಾಹಿತಿ ಇದೆ.

Ad Widget ... ..

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ ನಾನೇ ಪವನ್ ಕಲ್ಯಾಣ್, ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ ಮಾಡಲ್ಲ, ಒತ್ತಾಯದ ಮೇರೆಗೆ ಅವರು ಬರುತ್ತಿದ್ದಾರೆ. ನಾನು ಕೂಡ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅವರು ಬಂದು ಹೋಗುತ್ತಾರೆ ಅಷ್ಟೇ, ಅವರು ಬಂದರೆ ನನ್ನ ಬಗ್ಗೆ ಆಗೀರಬಹುದು ರಕ್ಷ ರಾಮಯ್ಯ ಅವರ ಬಗ್ಗೆ ವಿರುದ್ದವಾಗಿ ಮಾತನಾಡಲ್ಲ ಎಂದು ಹೇಳಿದ್ದಾರೆ.

Ad Widget

Leave a Comment

Your email address will not be published. Required fields are marked *