ಚಾಮರಾಜನಗರ : ವಿದ್ಯುತ್ ತಂತಿ ತಗುಲಿ ಮೇವು ಸಾಗಣೆ ಲಾರಿ ಸುಟ್ಟು ಭಸ್ಮ

ಸಮಗ್ರ ನ್ಯೂಸ್‌ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯಹಟ್ಟಿ ಹಾಗೂ ಪಳನಿಮೇಡು ಮಾರ್ಗ ಮಧ್ಯೆ ಗೋಶಾಲೆಗೆ ಮೇವು ತುಂಬಿಕೊಂಡು ತೆರುಳುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

Ad Widget ... ..

ಚಾಮರಾಜನಗರ ಜಿಲ್ಲೆಯ ಕುರಟ್ಟಿಹೊಸೂರಿಗೆ ಜಾನುವಾರುಗಳಿಗೆ ಮೇವು ಸಾಗಣೆ ಮಾಡುತ್ತಿದ್ದ ಲಾರಿಗೆ ಪಳನಿಮೇಡು ಹಾಗೂ ಕೆಂಪಯ್ಯನಹಟ್ಟಿ ಮಾರ್ಗ ಮಧ್ಯೆ ಅಚಾನ್ ಕ್ಕಾಗಿ ವಿದ್ಯುತ್ ತಂತಿ ತಗಲಿದ ಪರಿಣಾಮ ಮೇವು ಸಮೇತ ಲಾರಿ ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲಾಗಿದೆ.

Ad Widget

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಅಧಿಕಾರಿಗಳು ಆಗಮಿಸಿ ಬೆಂಕಿಯನ್ನು ನಂದಿಸಲು ಮುಂದಾದರು. ಸ್ಥಳಕ್ಕೆ ರಾಮಾಪುರ ಪೋಲಿಸರು ಸಹ ಆಗಮಿಸಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *