ಸಮಗ್ರ ನ್ಯೂಸ್: 2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರೀಕ ಸೇವಾ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಕರ್ನಾಟಕದ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗುವ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ
2023ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗವು 1016 ಪೋಸ್ಟ್ಗಳಿಗೆ ಅರ್ಜಿ ಆಹ್ವಾನಿಸಿತ್ತು, ಇದಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಅಂತಿಮವಾಗಿ ಆದಿತ್ಯಾ ಶ್ರೀವಾಸ್ತವ ಮೊದಲೇ ರ್ಯಾಂಕ್ ಪಡೆದರೆ, ಅನಿಮೇಶ್ ಪ್ರಧಾನ್ ದ್ವಿತೀಯ ರ್ಯಾಂಕ್, ದೋರೂರು ಅನನ್ಯ ರೆಡ್ಡಿ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಕರ್ನಾಟಕದಿಂದ 15ಕ್ಕು ಹೆಚ್ಚು ಮಂದಿ ಯುಪಿಎಸ್ಸಿ ಪರೀಕ್ಷೆ ಬರೆದು ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ. ಧಾರವಾಡ ಮೂಲದ ಸೌಭಾಗ್ಯ 105ನೇ ರ್ಯಾಂಕ್, ಭಾನುಪ್ರಕಾಶ್ ಗೆ 600ನೇ ರ್ಯಾಂಕ್, ಭರತ್.ಸಿ ಗೆ 667ನೇ ರ್ಯಾಂಕ್ ಬಂದಿದೆ. ಇನ್ನು, ಬೆಂಗಳೂರಿನಲ್ಲಿ ಪಿಎಸ್ಐ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್ 644ನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಅತ್ಯನ್ನತ ನಾಗರೀಕ ಸೇವೆ ಸಲ್ಲಿಸಲು ತಯಾರಾಗಿದ್ದಾರೆ.