ತ್ರಿಶತಕ ಬಾರಿಸಿ ಮುನ್ನಡೆದ ಕೊಕ್ಕೋ| ಬೇಡಿಕೆ ಈಡೇರಿಸದ ಪೂರೈಕೆ

ಸಮಗ್ರ ನ್ಯೂಸ್: ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕೋಕೋ ಬೆಲೆ ಕೆಜಿಗೆ 300 ರೂ. ದಾಟಿದೆ.‌ ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಂಪ್ಕೊ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿ, ಕೆ.ಜಿ.ಗೆ ಕೇವಲ 85 ರೂ. ಇದ್ದ ಕೋಕೋ ಬೀಜದ ಬೆಲೆ ಈಗ 300 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ

Ad Widget ... ..

ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿನ್ಹ್ ಸಹಕಾರಿ ಸೊಸೈಟಿ (ಕ್ಯಾಂಪ್ಕೊ) ಕೋಕೋ ಬೀಜಗಳನ್ನು ಸಂಗ್ರಹಿಸುತ್ತಿದ್ದು, ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಸಸಿಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.

Ad Widget

ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಆಫ್ರಿಕನ್ ದೇಶಗಳು ಕೂಡ ಸರಬರಾಜು ಮಾಡುತ್ತಿಲ್ಲ. ಆಂಧ್ರಪ್ರದೇಶದಲ್ಲಿ ಚಂಡಮಾರುತದ ಪರಿಣಾಮ ಪೂರೈಕೆ ಸಾಧ್ಯವಾಗಿಲ್ಲ, ಕರಾವಳಿ ಕರ್ನಾಟಕದಲ್ಲಿಯೂ ಕೋಕೋ ತೋಟಗಳು ಕಡಿಮೆಯಾಗಿದೆ. ಈ ಹಿಂದೆ ಬೀಜಗಳ ಬೆಲೆ ಕೆಜಿಗೆ ರೂ 55 ರಿಂದ ರೂ 85 ರ ನಡುವೆ ಇತ್ತು, ಒಣ ಬೀಜಗಳ ಬೆಲೆ ಕೆಜಿಗೆ ರೂ 210 ರಿಂದ ರೂ 240 ರ ನಡುವೆ ಇತ್ತು. ಇದೀಗ 875 ರೂಗೆ ಏರಿಕೆಯಾಗಿದೆ. ಅಡಕೆ ಬೆಲೆ ಏರಿಕೆ, ಮಂಗಗಳ ದಾಳಿಯಿಂದಾಗಿ ಸಾಕಷ್ಟು ರೈತರು ಕೋಕೋ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇದರ ಉತ್ಪಾದನೆಯು ಕೇವಲ 1000 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *