ಉದಯ ಟಿವಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ ಜೈನ್ ಇನ್ನಿಲ್ಲ

ಸಮಗ್ರ ನ್ಯೂಸ್: ಖ್ಯಾತ ಜ್ಯೋತಿಷಿ ಎಸ್​.ಕೆ.ಜೈನ್ ಅವರು ವಿಧವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

Ad Widget ... ..

ಖ್ಯಾತ ಜ್ಯೋತಿಷಿ ಎಸ್​.ಕೆ.ಜೈನ್ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ ಎನ್ನಲಾಗಿದೆ. ಎಸ್​.ಕೆ.ಜೈನ್ ಅವರ ಪ್ರಾರ್ಥೀವ ಶರೀರವನ್ನು ಬೆಂಗಳೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಂದು ರಾತ್ರಿ ಆಸ್ಪತ್ರೆಯಿಂದ ತರಲಾಗುವುದು, ಬಳಿಕ ನಾಳೆಯೇ ಅವರ ಅಂತ್ಯಸಂಸ್ಕಾರವನ್ನು ನೇರವೇರಿಸಲಾಗುವುದು ಅಂತ ತಿಳಿದುಬಂದಿದೆ.

Ad Widget

ಉದಯ ವಾಹಿನಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಕನ್ನಡ ವಿದ್ಯುನ್ಮಾನ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂಬ ಹೆಸರಿನೊಂದಿಗೆ ಖ್ಯಾತಿಯನ್ನು ಹೊಂದಿದ್ದರು. ಹಲವಾರು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನ ನೆಡೆಸಿಕೊಡುತ್ತಿದ್ದರು.

ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ವಾಹಿನಿಗಳಲ್ಲಿ ರಾಶಿ ಫಲಾಫಲ ಸೇರಿದಂತೆ ದಿನದ ವಿಶೇಷತೆಗಳ ಬಗ್ಗೆ ಜ್ಯೋತಿಷ್ಯ ಹೇಳುತ್ತಿದ್ದರು.

Leave a Comment

Your email address will not be published. Required fields are marked *