ಬ್ರಿಟನ್: ಯುವಕನೋರ್ವ ಕಾಮದ ಮದ ಏರಿ ಕುದುರೆಯೊಂದನ್ನು ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಜಾಮೀನು ರಹಿತವಾಗಿ ಬಂಧಿಸಲಾಗಿದೆ.
19 ವರ್ಷದ ವಿಕೃತ ಕಾಮಿ ಯುವಕ ಜುಲೈ 15 ರಂದು ಮುಂಜಾನೆ 4 ಗಂಟೆಗೆ ಆಲ್ಸ್ಟನ್ ನಗರದ ಟರ್ನರ್ ಹಿಲ್ ಸೆಂಟರ್ ಗೆ ತೆರಳಿದ್ದಾನೆ. ಅಲ್ಲಿದ್ದ ಹೆಣ್ಣು ಕುದುರೆಯನ್ನು ಹಿಡಿದು ಅತ್ಯಾಚಾರ ನಡೆಸಿದ್ದಾನೆ. ಯುವಕನ ಹೀನಾಯ ಕೃತ್ಯ ಅಲ್ಲಿನ ಕ್ಯಾಮರದಲ್ಲಿ ಸೆರೆಯಾಗಿದೆ.
ಕುದುರೆ ಮೇಲೆ ಅತ್ಯಾಚಾರ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವ್ರೆಂಥಾಮ್ನ ಜಿಲ್ಲಾ ನ್ಯಾಯಾಧೀಶರು ಆತನಿಗೆ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಆತನನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಲು ಆದೇಶಿಸಿದ್ದಾರೆ. ಯುವಕನ ಪರ ವಕೀಲರು ಜಾಮೀನಿನ ಮೇಲೆ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.