ಸಮಗ್ರ ನ್ಯೂಸ್: ಪೋಬ್ರ್ಸ್ ವಿಶ್ವದ ಬಿಲಿಯನೇರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಪಟ್ಟಿಯಲ್ಲಿ 200 ಭಾರತೀಯರು ಸೇರಿಕೊಂಡಿದ್ದು, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಬರೋಬ್ಬರಿ 116 ಶತಕೋಟಿ ಡಾಲರ್ಗಳ ಮಾಲಕರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಭಾರತ ಹಾಗೂ ಏಷ್ಯಾದಲ್ಲಿಯೇ ಮುಖೇಶ್ ಅಂಬಾನಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಲ್ಲದೆ ಅವರು ಜಾಗತಿಕ ಮಟ್ಟದಲ್ಲಿಯೂ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಿವ್ವಳ ಮೌಲ್ಯವು 39.76% ಹೆಚ್ಚಾಗಿದ್ದು, ಅವರು 100 ಬಿಲಿಯನ್ ಡಾಲರ್ ಕ್ಲಬ್ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾಗಿದ್ದಾರೆ ಎಂದು ಪೆÇೀಟ್ರ್ಸ್ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಬರ್ನಾರ್ಡ್ ಅರ್ನಾಲ್ಡ್ ಮತ್ತು ಕುಟುಂಬದವರು 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಎಲೋನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್ಬರ್ಗ್, ಲ್ಯಾರಿ ಎಲಿಸನ್ ಇದ್ದಾರೆ.
ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ 84 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಾವಿತ್ರಿ ಜಿಂದಾಲ್ 33.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ನರೇಶ್ ಟ್ರಿಹಾನ್, ರಮೇಶ್ ಕುಂಕಣ್ಣನ್ ಮತ್ತು ರೇಣುಕಾ ಜಗ್ತಿಯಾನಿ ಸಹಿತ 25 ಹೊಸ ಭಾರತೀಯ ಬಿಲಿಯನೇರ್ಗಳು ಈ ಪಟ್ಟಿಗೆ ಸೇರಿದ್ದಾರೆ. ಬೈಜು ರವೀಂದ್ರನ್, ರೋಹಿಕಾ ಮಿಸ್ತ್ರಿ ಅವರನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ.







