ಬೀದರ್: ಸಾಲದ ಹೊರೆಯಿಂದ ಬಾವಿಗೆ ಬಿದ್ದು ರೈತ ಆತ್ಮಹತ್ಯೆ

ಸಮಗ್ರ ನ್ಯೂಸ್‌ : ರೈತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ ಜಿಲ್ಲೆಯ ಔರದ್‌ ತಾಲ್ಲೂಕಿನ ಮುಸ್ತಾಪುರ ಗ್ರಾಮದಲ್ಲಿ ‌ ನಡೆದಿದೆ.

Ad Widget ... ..

ಉಮೇಶ ಹುಲ್ಲೆಪ್ಪ (45) ಆತ್ಮಹತ್ಯೆಗೆ ಶರಣಾಗಿರುವ ರೈತ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ಮೃತದೇಹ ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Ad Widget

ಮೃತ ರೈತನಿಗೆ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಲಾಧಾ ಪಿಕೆಪಿಎಸ್‌ನಿಂದ ₹1 ಲಕ್ಷ ಹಾಗೂ ಖಾಸಗಿ ಬ್ಯಾಂಕನಿಂದ ₹2 ಲಕ್ಷ ಸಾಲ ಮಾಡಿದ್ದರು. ಸಾಲದ ಹೊರೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಮೃತರ ಹೆಂಡತಿ ಜಗದೇವಿ ನೀಡಿದ ದೂರಿನ ಮೇರೆಗೆ ಸಂತಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *