ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ/ ನಾಳೆಯು ಬಾಗಿಲು ತೆರೆಯಲಿದೆ ಜೀವ ವಿಮಾ ನಿಗಮ (ಎಲ್‍ಐಸಿ)

ಸಮಗ್ರ ನ್ಯೂಸ್: ದೇಶದಾದ್ಯಂತ ವಾರಾಂತ್ಯದ ದಿನಗಳಾದ ಮಾ.31 ಭಾನುವಾರ ಗ್ರಾಹಕರಿಗೆ ಸೇವೆಗಾಗಿ ತನ್ನ ಕಚೇರಿಗಳನ್ನು ತೆರೆಯಲು ಜೀವ ವಿಮಾ ನಿಗಮ (ಎಲ್‍ಐಸಿ) ಸಂಸ್ಥೆಯು ತೀರ್ಮಾನಿಸಿದೆ. ಪ್ರಸಕ್ತ ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ ತೆರಿಗೆ ಉಳಿಕೆ ಚಟುವಟಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಎಲ್‍ಐಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

Ad Widget ... ..

ಯಾವುದೇ ಆರ್ಥಿಕ ವಹಿವಾಟಿನ ತೊಂದರೆಯಾಗದಂತೆ, ಹಣಕಾಸಿನ ವಷಾರ್ಂತ್ಯದಲ್ಲಿ ವಿಮಾದಾರರಿಗೆ ತನ್ನ ವಲಯ ಮತ್ತು ವ್ಯಾಪ್ತಿಯ ಎಲ್ಲ ಕಚೇರಿಗಳು ಮಾ. 31 ರಂದು ಸಾಮಾನ್ಯ ಔದ್ಯೋಗಿಕ ಕೆಲಸದ ಅವಧಿಯಂತೆ ಕಾರ್ಯನಿರ್ವಹಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಎಲ್‍ಐಸಿ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Ad Widget

ಇನ್ನು ಸರ್ಕಾರದೊಂದಿಗೆ ವ್ಯವಹಾರ ಹೊಂದಿರುವ ಸೀಮಿತ ಬ್ಯಾಂಕ್ ಶಾಖೆಗಳು ಭಾನುವಾರ ಕೂಡಾ ತೆರೆದಿರುತ್ತವೆ ಎಂದು ಬ್ಯಾಂಕ್‍ಗಳು ಘೋಷಣೆ ಮಾಡಿದ್ದವು.

Leave a Comment

Your email address will not be published. Required fields are marked *