ಸಮಗ್ರ ನ್ಯೂಸ್ : ಮಾಜಿ ಸಿಎಂ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್ ಶಾಸಕ ರಮೇಶ್ ಬಂಡೀಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ್ದು, ಮಳವಳ್ಳಿಯ ಕಾಂಗ್ರೆಸ್ ಸಭೆಯಲ್ಲಿ ಹೆಚ್ಡಿಕೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಅವರು, ಚುನಾವಣೆ ಬಂತು ಎಂದರೇ ಸಾಕು ಆಸ್ಪತ್ರೆ ಸೇರ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತೆ. ನಾಲ್ಕನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ. ಅದು ಹೇಗೆ ಸಾಧ್ಯ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಚಲುವರಾಯಸ್ವಾಮಿಗೆ ಇರುವ ಕಾಯಿಲೆ ಅವರ ಸ್ನೇಹಿತ ಕುಮಾರಸ್ವಾಮಿಯವರಿಗೆ ಇದೆ. ಚಲುವರಾಯಸ್ವಾಮಿ ಆಸ್ಪತ್ರೆ ಸೇರಿದದೆ ಒಂದು ತಿಂಗಳು ಈಚೆಗೆ ಬರಲ್ಲ. ಅದು ಹೇಗೆ ಹಾರ್ಟ್ ಆಪರೇಷನ್ ಮಾಡಿಸಿ 2 ದಿನಕ್ಕೆ ಆಚೆ ಬರುತ್ತಾರೆ ಎಂದು ಕೇಳಿದರು.
ಈ ಚುನಾವಣೆ ಅಭಿವೃದ್ದಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೆ ಕೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.