ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಫೋಟೋಗ್ರಾಫರ್‌ ಮೃತ್ಯು

ಸಮಗ್ರ ನ್ಯೂಸ್:ಮದುವೆ ಸಮಾರಂಭಕ್ಕೆ ಫೋಟೋಗ್ರಫಿ ಮಾಡಲು ತೆರಳಿದ್ದ ಫೋಟೋಗ್ರಾಫರ್‌ರೊಬ್ಬರು ಮರಳಿ ಬರುವಾಗ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ನಡೆದಿದೆ.

Ad Widget ... ..

ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿಯ ಫೋಟೋಗ್ರಾಫರ್ ಅಭಿಷೇಕ್ (30) ಮೃತಪಟ್ಟ ಯುವಕ. ಈತ ಮೊಳಕಾಲ್ಮೂರು ತಾಲೂಕಿನ ರಾಯದುರ್ಗದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದಕ್ಕೆ ಫೋಟೋ ತೆಗೆಯಲು ಹೋಗಿ ಮರಳಿ ನಗರಕ್ಕೆ ಕಾರಿನಲ್ಲಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Ad Widget

Leave a Comment

Your email address will not be published. Required fields are marked *