ಮತ್ತೊಮ್ಮೆ ಮೋದಿ ಸರ್ಕಾರ/ ಏಷ್ಯಾನೆಟ್ ಡಿಜಿಟಲ್ ನೆಟ್‍ವರ್ಕ್ ಸಮೀಕ್ಷೆ

ಸಮಗ್ರ ನ್ಯೂಸ್: ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವೇ ಸೂಕ್ತ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್‍ವರ್ಕ್ ಸಮೀಕ್ಷೆಯಲ್ಲಿ ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ಇಂಡಿಯಾ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.

Ad Widget ... ..

ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್ ಆನ್‍ಲೈನ್‍ನಲ್ಲಿ ನಡೆಸಿದ ಮೆಗಾ ಮೂಡ್ ಆಫ್ ದ ನೇಷನ್ ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ಎನ್‍ಡಿಎಗೆ ಪೈಪೆÇೀಟಿ ನೀಡಲು ವಿಪಕ್ಷಗಳು ದೊಡ್ಡ ಮಟ್ಟದ ಸಾಹಸ ಪ್ರದರ್ಶನ ಮಾಡಬೇಕಿದೆ. ಮೋದಿ ಅಲೆಯನ್ನು ತಡೆಯಲು ಇಂಡಿಯಾ ಕೂಟಕ್ಕೆ ಸಾಧ್ಯವಿಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಯಿಂದ ಅವರ ಪಕ್ಷಕ್ಕೆ ಹೆಚ್ಚು ಲಾಭವಿಲ್ಲ ಎನ್ನುವುದು ಕಂಡುಬಂದಿದೆ.

Ad Widget

ಏಷ್ಯಾನೆಟ್ ನ್ಯೂಸ್ ನೆಟ್‍ವರ್ಕ್‍ನ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳು ಮಾ.13- ಮಾ.27 ರ ನಡುವೆ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿಯಲ್ಲಿ ನಡೆಸಿದ ವ್ಯಾಪಕ ಸಮೀಕ್ಷೆಗೆ 7,59,340 ಪ್ರತಿಕ್ರಿಯೆಗಳು ಬಂದಿವೆ.

Leave a Comment

Your email address will not be published. Required fields are marked *