ಪುತ್ತೂರು: ಬಸ್ ನಿಲ್ದಾಣದಲ್ಲೇ ಚೂರಿ ಇರಿತ

ಸಮಗ್ರ ನ್ಯೂಸ್: ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು ಚೂರಿ ಇರಿದ ಘಟನೆ ನಡೆದಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಬೆಳಗಾವಿ ಜಿಲ್ಲೆಯ ಮಲ್ಲಪುರ ಗೋಕಾಕ್‌ ನಿವಾಸಿ ಕೂಲಿ ಕಾರ್ಮಿಕ ಆನಂದ ಬಾಂದಾವಿ ಚೂರಿ ಇರಿತಕ್ಕೊಳಗಾದವರು. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Ad Widget

ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಪರಿಚಯಸ್ಥರಾದ ಅವಿನಾಶ್‌, ನಾರಾಯಣ, ದುಗೇìಶ್‌ ಮತ್ತು ಹರೀಶ್‌ರೊಂದಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾಗ ಆರೋಪಿ ಅವಿನಾಶ್‌ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿಬಳಿಕ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ.

Leave a Comment

Your email address will not be published. Required fields are marked *