ಕುಡಿಯುವ ನೀರಿನ ದುರ್ಬಳಕೆ/ ಬೆಂಗಳೂರಿನಲ್ಲಿ ಕಾರ್ ತೊಳೆದ 22 ಮಂದಿಗೆ ದಂಡ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲದೆ ಸಾಕಷ್ಟು ಮಂದಿ ಪರದಾಡುತ್ತಿರುವ ಸಂದರ್ಭದಲ್ಲಿ ಕುಡಿಯುವ ನೀರನ್ನು ಬಳಕೆ ಮಾಡಿ ಕಾರ್ ತೊಳೆದ 22 ಮಂದಿಗೆ ದಂಡ ವಿಧಿಸಲಾಗಿದೆ.

Ad Widget ... ..

ಕುಡಿಯುವ ನೀರನ್ನು ಕಾರ್ ತೊಳೆಯಲು ಬಳಸಬಾರದು ಎನ್ನುವ ಆದೇಶ ಇದ್ದರೂ ಕಾವೇರಿ ಹಾಗೂ ಕೊಳವೆ ಬಾವಿ ನೀರನ್ನು ಬಳಕೆ ಮಾಡಿದ್ದ 22 ಮಂದಿಯಿಂದ ಜಲಮಂಡಳಿ 1.10 ಲಕ್ಷ ರೂಪಾಯಿ ವಸೂಲಿ ಮಾಡಿದೆ.

Ad Widget

ಜಲಮಂಡಳಿ ಕಟ್ಟುನಿಟ್ಟಿನ ಆದೇಶ ಲೆಕ್ಕಿಸದ ಕೆಲವರು ಕುಡಿಯಲು ಮತ್ತು ಗೃಹ ಬಳಕೆಗೆ ಬಳಸಲಾಗುವ ನೀರಿನಲ್ಲಿಯೇ ವಾಹನಗಳನ್ನು ತೊಳೆಯುತ್ತಿರುವುದು ಕಂಡು ಬಂದಿದೆ. ಜಲಮಂಡಳಿಯು ಸೋಮವಾರದಿಂದ ವಿಶೇಷ ತಪಾಸಣಾ ಕಾರ್ಯ ಕೈಗೊಂಡಿದೆ.

Leave a Comment

Your email address will not be published. Required fields are marked *