ಸಮಗ್ರ ನ್ಯೂಸ್: ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘ ನೂತನವಾಗಿ ಉದ್ಘಾಟನೆಗೊಂಡಿತು. ಗಣೇಶ್ ನಾಯರ್ ನೇತ್ರತ್ವದಲ್ಲಿ ಹೊಸ ತಂಡ ಮಾ. 25ರಂದು ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಿಂಗಯ್ಯ ಅವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ನ್ಯಾಯಧೀಶ ವಿಜಯ ಕುಮಾರ್ ರೈ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡ ಸುಬ್ರಹ್ಮಣ್ಯ ದ ಅಜಿತೇಶ್ ಪಿ.ಎಸ್. ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ., ಮಾಜಿ ಪ್ರಾಂಶುಪಾಲ ದಿನೇಶ್ ಕಾಮತ್, ಕಾಲೇಜಿನ ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ., ನೂತನ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ನಾಯರ್ ನೇತ್ರತ್ವದಲ್ಲಿ ಪದಾಧಿಕಾರಿ ಭಾರತೀ ದಿನೇಶ್, ದೀಪಕ್ ನಂಬಿಯಾರ್, ಪವನ್ ಎಂ.ಡಿ. ದಯಾನಂದ ಯು., ಪ್ರದೀಪ್ ಕಳಿಗೆ, ತೇಜಸ್ ಕೆ., ನಿತಿನ್ ಕುಮಾರ್ ಎಸ್., ವಿಮಲ, ರಂಗಯ್ಯ, ಲೋಕೆಶ್ ಬಿ.ಎನ್., ಚಂದ್ರಶೇಖರ ಜಿ.ಎನ್., ಪದ್ಮಕುಮಾರ್, ಗೋವರ್ಧನ, ಉಮೇಶ್ ಜೆ., ದಿನೇಶ ಎಸ್.ಎನ್., ಲತಾಶ್ರೀ ಸುಹಾಸ್ ಎನ್.ಎಸ್. ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಪ್ರಾಕ್ತನ ವಿದ್ಯಾರ್ಥಿ ಸಂಘದ ಸಂಯೋಜಕಿ ಶ್ರೀಲತಾ ಕಮಿಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.