ಅಶ್ಲೀಲ ಸಿನಿಮಾ ತಯಾರಿ ಮತ್ತು ಹಂಚಿಕೆ| ಉದ್ಯಮಿ ರಾಜ್ ಕುಂದ್ರಾ ಅರೆಸ್ಟ್

ಮುಂಬೈ: ಕೆಲವು ಆ್ಯಪ್​ಗಳ ಮೂಲಕ ಅಶ್ಲೀಲ ಸಿನಿಮಾಗಳನ್ನ ನಿರ್ಮಾಣ ಮಾಡಿ ಪ್ರಕಟಿಸುತ್ತಿದ್ದರೆಂಬ ಆರೋಪದ ಮೇಲೆ ಮುಂಬೈ ಕ್ರೈಮ್ ಬ್ರಾಂಚ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನ ಬಂಧಿಸಿದೆ.

Ad Widget ... ..

ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಆರೋಪಿ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸೂಕ್ತ ಸಾಕ್ಷ್ಯವಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದಾರೆ. ರಾಜ್​ ಕುಂದ್ರಾ ಸೋಮವಾರ ವಿಚಾರಣೆಗಾಗಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್​ ಪ್ರಾಪರ್ಟಿ ಸೆಲ್​ಗೆ ಬಂದಿದ್ದರು ಈ ವೇಳೆ ಅವರನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಇದೆ. ಪೊಲೀಸ್ ಮಾಹಿತಿಗಳ ಪ್ರಕಾರ ಅವರ ವಿರುದ್ಧ ಫೆಬ್ರವರಿ ತಿಂಗಳಲ್ಲಿ ಕೇಸ್ ದಾಖಲಾಗಿತ್ತು. ಅವರೇ ಪ್ರಮುಖ ಆರೋಪಿಯಾಗಿರುವುದು ಬೆಳಕಿಗೆ ಬಂದಿದ್ದರಿಂದ ಇಂದು ಅವರನ್ನ ಅರೆಸ್ಟ್ ಮಾಡಲಾಗಿದೆ.

Ad Widget

ಕಳೆದ ಫೆಬ್ರವರಿಯಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುತ್ತಿದ್ದ ಬಗ್ಗೆ ದೂರು ದಾಖಲಿಸಲಾಗಿತ್ತು. ತಮ್ಮ ಮೇಲೆ ಬಂದಿರುವ ಆರೋಪ ತಳ್ಳಿಹಾಕಿದ್ದ ಅವರು, ನ್ಯಾಯಾಲದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

Leave a Comment

Your email address will not be published. Required fields are marked *