ಬೆಳ್ತಂಗಡಿ: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈಗುಳ, ಜೀವ ಬೆದರಿಕೆ

ಸಮಗ್ರ ನ್ಯೂಸ್:‌ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿದ ಘಟನೆ ಉಜಿರೆ ಗ್ರಾಮದ ರಥಬೀದಿಯಲ್ಲಿ ನಡೆದಿದೆ.

Ad Widget ... ..

ಉಜಿರೆ ಗ್ರಾಮ ಬೆಳ್ತಂಗಡಿ ನಿವಾಸಿ ಹರೀಶ್‌ ಆಚಾರ್ಯ ಎಂಬವರು ಮಾ. ೨೧ ರಂದು ರಾತ್ರಿ ಉಜಿರೆ ಗ್ರಾಮದ ರಥಬೀದಿಯಲ್ಲಿರುವ ಸಮಯ, ಆರೋಪಿಗಳಾದ ಉಜಿರೆ ಗ್ರಾಮದ ಮನೋಜ , ಕಲ್ಮಂಜ ಬೆಳ್ತಂಗಡಿ ಪ್ರಜ್ವಲ್‌ ಗೌಡ ಕೆ ವಿ ಹಾಗೂ ಉಜಿರೆ ಬೆಳ್ತಂಗಡಿ ಜಯಂತ ಎಂಬವರು ಕೆಎ-21-ಎನ್-9957‌ ನೇ ನಂಬ್ರದ ಕಾರು ಹಾಗೂ ಒಮಿನಿ ಗಾಡಿಯಲ್ಲಿ ಬಂದು ಹರೀಶ್‌ ಆಚಾರ್ಯರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುತ್ತಾರೆ, ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ad Widget

Leave a Comment

Your email address will not be published. Required fields are marked *