ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್:‌ ಮುಂಬಯಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೋಟ ಸಮೀಪ ಅಚ್ಲಾಡಿ ಮಕ್ಕಿಮನೆ ನಿವಾಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಅನ್ವಿಶ್‌ (19) ಚಿಕಿತ್ಸೆ ಫಲಿಸದೆ ಮುಂಬಯಿಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಘಟನೆ ನಡೆದಿದೆ.

Ad Widget ... ..

ಈತ ಕಾವಡಿ ವರದರಾಜ್‌ ಶೆಟ್ಟಿ ಮತ್ತು ಅಚ್ಲಾಡಿಯ ಲತಾ ಶೆಟ್ಟಿ ಅವರ ಪುತ್ರನಾಗಿದ್ದು ತಂದೆ ರೈಲ್ವೆ ಉದ್ಯೋಗಿಯಾಗಿದ್ದರು.ಅನ್ವಿಶ್‌ ಮುಂಬಯಿಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು 15 ದಿನದ ಹಿಂದೆ ಸಂಬಂಧಿಕರ ಮನೆಯಿಂದ ರಾತ್ರಿ ಬೈಕ್‌ನಲ್ಲಿ ಮರಳುತ್ತಿದ್ದಾಗ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *